ಶ್ರೀ ಗಣೇಶಾಯ ನಮಃ ।
ಶ್ರೀ ಗುರುಭ್ಯೋ ನಮಃ ।
ಹರಿಃ ಓಂ ।
ಶುಚಿಃ –
(ಉದ್ಧರಿಣಿಯಿಂದ ಪಂಚಪಾತ್ರದಿಂದ ನೀರು ತೆಗೆದುಕೊಳ್ಳಿ)
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ । (ಹೆಬ್ಬೆರಳಿನಿಂದ ಉದ್ಧರಿಣಿಯ ನೀರನ್ನು ತಲೆಯ ಮೇಲೆ ಚಿಮ್ಮಿ)
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ॥ (ಹೆಬ್ಬೆರಳಿನಿಂದ ಉದ್ಧರಿಣಿಯ ನೀರನ್ನು ತಲೆಯ ಮೇಲೆ ಚಿಮ್ಮಿ)
ಪುಂಡರೀಕಾಕ್ಷ ಪುಂಡರೀಕಾಕ್ಷ ಪುಂಡರೀಕಾಕ್ಷಾಯ ನಮಃ ॥ (ಹೆಬ್ಬೆರಳಿನಿಂದ ಉದ್ಧರಿಣಿಯ ನೀರನ್ನು ತಲೆಯ ಮೇಲೆ ಚಿಮ್ಮಿ)
ಪ್ರಾರ್ಥನಾ –
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥
ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಶಂ ।
ಅನೇಕದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ ॥
ಯಃ ಶಿವೋ ನಾಮ ರೂಪಾಭ್ಯಾಂ ಯಾ ದೇವೀ ಸರ್ವಮಂಗಲಾ ।
ತಯೋಃ ಸಂಸ್ಮರಣಾನ್ನಿತ್ಯಂ ಸರ್ವದಾ ಜಯ ಮಂಗಲಂ ॥
ತದೇವ ಲಗ್ನಂ ಸುದಿನಂ ತದೇವ
ತಾರಾಬಲಂ ಚಂದ್ರಬಲಂ ತದೇವ ।
ವಿದ್ಯಾಬಲಂ ದೈವಬಲಂ ತದೇವ
ಲಕ್ಷ್ಮೀಪತೇ ತೇಽಙ್ಘ್ರಿಯುಗಂ ಸ್ಮರಾಮಿ ॥
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ ।
ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರವೇ ನಮಃ ॥
ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಭವಃ ।
ಏಷಾಮಿಂದೀವರಶ್ಯಾಮೋ ಹೃದಯಸ್ಥೋ ಜನಾರ್ದನಃ ॥
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಽಸ್ತು ತೇ ॥
ಶ್ರೀಲಕ್ಷ್ಮೀನಾರಾಯಣಾಭ್ಯಾಂ ನಮಃ ।
ಉಮಾಮಹೇಶ್ವರಾಭ್ಯಾಂ ನಮಃ ।
ವಾಣೀಹಿರಣ್ಯಗರ್ಭಾಭ್ಯಾಂ ನಮಃ ।
ಶಚೀಪುರಂದರಾಭ್ಯಾಂ ನಮಃ ।
ಅರುಂಧತೀವಸಿಷ್ಠಾಭ್ಯಾಂ ನಮಃ ।
ಶ್ರೀಸೀತಾರಾಮಾಭ್ಯಾಂ ನಮಃ ।
ಮಾತಾಪಿತೃಭ್ಯೋ ನಮಃ ।
ಸರ್ವೇಭ್ಯೋ ಮಹಾಜನೇಭ್ಯೋ ನಮಃ ।
ಓಂ ಕೇಶವಾಯ ಸ್ವಾಹಾ ।
ಓಂ ನಾರಾಯಣಾಯ ಸ್ವಾಹಾ ।
ಓಂ ಮಾಧವಾಯ ಸ್ವಾಹಾ ।
ಓಂ ಗೋವಿಂದಾಯ ನಮಃ ।
ಓಂ ವಿಷ್ಣವೇ ನಮಃ ।
ಓಂ ಮಧುಸೂದನಾಯ ನಮಃ ।
ಓಂ ತ್ರಿವಿಕ್ರಮಾಯ ನಮಃ ।
ಓಂ ವಾಮನಾಯ ನಮಃ ।
ಓಂ ಶ್ರೀಧರಾಯ ನಮಃ ।
ಓಂ ಹೃಷೀಕೇಶಾಯ ನಮಃ ।
ಓಂ ಪದ್ಮನಾಭಾಯ ನಮಃ ।
ಓಂ ದಾಮೋದರಾಯ ನಮಃ ।
ಓಂ ಸಂಕರ್ಷಣಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ಪ್ರದ್ಯುಮ್ನಾಯ ನಮಃ ।
ಓಂ ಅನಿರುದ್ಧಾಯ ನಮಃ ।
ಓಂ ಪುರುಷೋತ್ತಮಾಯ ನಮಃ ।
ಓಂ ಅಧೋಕ್ಷಜಾಯ ನಮಃ ।
ಓಂ ನಾರಸಿಂಹಾಯ ನಮಃ ।
ಓಂ ಅಚ್ಯುತಾಯ ನಮಃ ।
ಓಂ ಜನಾರ್ದನಾಯ ನಮಃ ।
ಓಂ ಉಪೇಂದ್ರಾಯ ನಮಃ ।
ಓಂ ಹರಯೇ ನಮಃ ।
ಓಂ ಶ್ರೀಕೃಷ್ಣಾಯ ನಮಃ ।
ದೀಪಾರಾಧನಂ –
ದೀಪಸ್ತ್ವಂ ಬ್ರಹ್ಮರೂಪೋಽಸಿ ಜ್ಯೋತಿಷಾಂ ಪ್ರಭುರವ್ಯಯಃ ।
ಸೌಭಾಗ್ಯಂ ದೇಹಿ ಪುತ್ರಾಂಶ್ಚ ಸರ್ವಾನ್ಕಾಮಾಂಶ್ಚ ದೇಹಿ ಮೇ ॥
ಶುಭಂ ಕರೋತಿ ಕಲ್ಯಾಣಮಾರೋಗ್ಯಂ ಧನಸಂಪದಾ ।
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಽಸ್ತುತೇ ॥
(ದೀಪಕ್ಕೆ ಮೂರು ಅರಿಶಿನ-ಕುಂಕುಮದ ಬೊಟ್ಟು ಹಾಕಿ, ಮೇಲಿನ ಶ್ಲೋಕವನ್ನು ಪಠಿಸುತ್ತಾ ಅಗರುಬತ್ತಿಯಿಂದ ದೀಪವನ್ನು ಉರಿಸಿ, ಸ್ವಲ್ಪ ಹೂವು-ಅಕ್ಷತೆಯನ್ನು ದೀಪದ ಬಳಿ ಇಟ್ಟು ನಮಸ್ಕರಿಸಿ)
ಭೂತೋಚ್ಚಾಟನಂ –
ಉತ್ತಿಷ್ಠಂತು ಭೂತಪಿಶಾಚಾಃ ಯ ಏತೇ ಭೂಮಿ ಭಾರಕಾಃ ।
ಏತೇಷಾಮವಿರೋಧೇನ ಬ್ರಹ್ಮಕರ್ಮ ಸಮಾರಭೇ ॥
ಅಪಸರ್ಪಂತು ತೇ ಭೂತಾ ಯೇ ಭೂತಾ ಭೂಮಿಸಂಸ್ಥಿತಾಃ ।
ಯೇ ಭೂತಾ ವಿಘ್ನಕರ್ತಾರಸ್ತೇ ಗಚ್ಛಂತು ಶಿವಾಽಜ್ಞಯಾ ॥
(ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ಮೇಲಿನ ಶ್ಲೋಕವನ್ನು ಪಠಿಸುತ್ತಾ ಮೂಸಿನೋಡಿ ನಿಮ್ಮ ಎಡದಿಂದ ಹಿಂದಕ್ಕೆ ಎಸೆಯಿರಿ)
ಪ್ರಾಣಾಯಾಮಂ –
ಓಂ ಭೂಃ ಓಂ ಭುವ॑: ಓಗ್ಂ ಸುವ॑: ಓಂ ಮಹ॑: ಓಂ ಜನ॑: ಓಂ ತಪ॑: ಓಗ್ಂ ಸತ್ಯಂ ।
ಓಂ ತತ್ಸ॑ವಿತು॒ರ್ವರೇ᳚ಣ್ಯಂ॒ ಭ॒ರ್ಗೋ॑ ದೇ॒ವಸ್ಯ॑ ಧೀ॒ಮಹಿ ।
ಧಿಯೋ॒ ಯೋ ನ॑: ಪ್ರಚೋ॒ದಯಾ᳚ತ್ ।
ಓಮಾಪೋ॒ ಜ್ಯೋತೀ॒ ರಸೋ॒ಽಮೃತಂ॒ ಬ್ರಹ್ಮ॒ ಭೂರ್ಭುವ॒ಸ್ಸುವ॒ರೋಂ ॥
(ಮೂರು ಬಾರಿ ಪ್ರಾಣಾಯಾಮ ಮಾಡಿ.)
ಸಂಕಲ್ಪಂ –
(ಹೂವು-ಅಕ್ಷತೆ ಮತ್ತು ಒಂದು ಹನಿ ನೀರನ್ನು ಬಲಗೈಯಲ್ಲಿ ತೆಗೆದುಕೊಂಡು ಕೆಳಗಿನ ಸಂಕಲ್ಪವನ್ನು ಪಠಿಸಿ)
ಮಮ ಉಪಾತ್ತ ಸಮಸ್ತ ದುರಿತಕ್ಷಯ ದ್ವಾರಾ ಶ್ರೀಪರಮೇಶ್ವರಮುದ್ದಿಶ್ಯ ಶ್ರೀಪರಮೇಶ್ವರ ಪ್ರೀತ್ಯರ್ಥಂ ಶುಭಾಭ್ಯಾಂ ಶುಭೇ ಶೋಭನೇ ಮುಹೂರ್ತೇ ಶ್ರೀಮಹಾವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣಃ ದ್ವಿತೀಯಪರಾರ್ಥೇ ಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭಾರತವರ್ಷೇ ಭರತಖಂಡೇ ಮೇರೋಃ ದಕ್ಷಿಣ ದಿಗ್ಭಾಗೇ ಶ್ರೀಶೈಲಸ್ಯ ___ ಪ್ರದೇಶೇ ___, ___ ನದ್ಯೋಃ ಮಧ್ಯಪ್ರದೇಶೇ ಲಕ್ಷ್ಮೀನಿವಾಸಗೃಹೇ ಸಮಸ್ತ ದೇವತಾ ಬ್ರಾಹ್ಮಣ ಆಚಾರ್ಯ ಹರಿ ಹರ ಗುರು ಚರಣ ಸನ್ನಿಧೌ ಅಸ್ಮಿನ್ ವರ್ತಮನೇ ವ್ಯಾವಹರಿಕ ಚಾಂದ್ರಮಾನೇನ ಶ್ರೀ ____ (1) ನಾಮ ಸಂವತ್ಸರೇ ___ ಅಯನೇ (2) ___ ಋತೌ (3) ___ ಮಾಸೇ(4) ___ ಪಕ್ಷೇ (5) ___ ತಿಥೌ (6) ___ ವಾಸರೇ (7) ___ ನಕ್ಷತ್ರೇ (8) ___ ಯೋಗೇ (9) ___ ಕರಣ (10)
ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಶ್ರೀಮಾನ್ ___ ಗೋತ್ರೋದ್ಭವಸ್ಯ ___ ನಾಮಧೇಯಸ್ಯ (ಮಮ ಧರ್ಮಪತ್ನೀ ಶ್ರೀಮತಃ ___ ಗೋತ್ರಸ್ಯ ___ ನಾಮಧೇಯಃ ಸಮೇತಸ್ಯ) ಮಮ/ಅಸ್ಮಾಕಂ ಸಹಕುಟುಂಬಸ್ಯ ಕ್ಷೇಮ ಸ್ಥೈರ್ಯ ಧೈರ್ಯ ವೀರ್ಯ ವಿಜಯ ಅಭಯ ಆಯುಃ ಆರೋಗ್ಯ ಐಶ್ವರ ಅಭಿವೃದ್ಧ್ಯರ್ಥಂ ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿದ್ಧ್ಯರ್ಥಂ ಧನ ಕನಕ ವಸ್ತು ವಾಹನ ಸಮೃದ್ಧ್ಯರ್ಥಂ ಸರ್ವಾಭೀಷ್ಟ ಸಿದ್ಧ್ಯರ್ಥಂ ಶ್ರೀ _____ ಉದ್ದಿಶ್ಯ ಶ್ರೀ _____ ಪ್ರೀತ್ಯರ್ಥಂ ಸಂಭವದ್ಭಿಃ ದ್ರವ್ಯೈಃ ಸಂಭವದ್ಭಿಃ ಉಪಚಾರೈಶ್ಚ ಸಂಭವತಾ ನಿಯಮೇನ ಸಂಭವಿತಾ ಪ್ರಕಾರೇಣ ಯಾವಚ್ಛಕ್ತಿ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ॥
(ನಿರ್ವಿಘ್ನ ಪೂಜಾ ಪರಿಸಮಾಪ್ತ್ಯರ್ಥಂ ಆದೌ ಶ್ರೀಮಹಾಗಣಪತಿ ಪೂಜಾಂ ಕರಿಷ್ಯೇ ।)
(ಇದನ್ನು ಪಠಿಸಿ ಹೂವು-ಅಕ್ಷತೆಯನ್ನು ತಟ್ಟೆಯಲ್ಲಿ ಬಿಟ್ಟು, ಕೈಗಳನ್ನು ಶುಚಿಗೊಳಿಸಿಕೊಳ್ಳಿ)
ತದಂಗ ಕಲಶಾರಾಧನಂ ಕರಿಷ್ಯೇ ॥
(ನಾವು ಆಚಮನ ಮಾಡಿದ ಪಂಚಪಾತ್ರದ ನೀರನ್ನು ದೇವರ ಪೂಜೆಗೆ ಬಳಸಬಾರದು. ಪೂಜೆಗೆ ಪ್ರತ್ಯೇಕವಾಗಿ ಒಂದು ಪಂಚಪಾತ್ರ ಅಥವಾ ಲೋಟ ತೆಗೆದುಕೊಂಡು ಅದರಲ್ಲಿ ಶುದ್ಧ ನೀರು ತುಂಬಿ, ಆ ಪಾತ್ರಕ್ಕೆ ಕಲಶಾರಾಧನೆ ಮಾಡಿ ಆ ನೀರನ್ನು ಮಾತ್ರ ದೇವರ ಪೂಜೆಗೆ ಬಳಸಬೇಕು)
(ಬಲಗೈಯಿಂದ ಕಲಶವನ್ನು ಮುಚ್ಚಿಡಿ, ಮತ್ತು ಕೆಳಗಿನ ಮಂತ್ರಗಳನ್ನು ಪಠಿಸಿ)
ಕಲಶಾರಾಧನಂ –
ಕಲಶೇ ಗಂಧ ಪುಷ್ಪಾಕ್ಷತೈರಭ್ಯರ್ಚ್ಯ । (ದೇವರ ಪಂಚಪಾತ್ರಕ್ಕೆ ಗಂಧ-ಕುಂಕುಮದ ಬೊಟ್ಟು ಹಾಕಿ, ಕಲಶದಲ್ಲಿ ಹೂವು-ಅಕ್ಷತೆಯನ್ನು ಇಡಿ)
ಕಲಶೇ ಉದಕಂ ಪೂರಯಿತ್ವಾ । (ದೇವರ ಪಂಚಪಾತ್ರದಲ್ಲಿ ನೀರು ತುಂಬಿಸಿ)
ಕಲಶಸ್ಯೋಪರಿ ಹಸ್ತಂ ನಿಧಾಯ । (ಬಲಗೈಯಿಂದ ಪಂಚಪಾತ್ರವನ್ನು ಮುಚ್ಚಿ, ಕೆಳಗಿನ ಶ್ಲೋಕವನ್ನು ಪಠಿಸಿ)
ಕಲಶಸ್ಯ ಮುಖೇ ವಿಷ್ಣುಃ ಕಂಠೇ ರುದ್ರಃ ಸಮಾಶ್ರಿತಃ ।
ಮೂಲೇ ತ್ವಸ್ಯ ಸ್ಥಿತೋ ಬ್ರಹ್ಮಾ ಮಧ್ಯೇ ಮಾತೃಗಣಾಃ ಸ್ಮೃತಾ ॥
ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುಂಧರಾ ।
ಋಗ್ವೇದೋಽಥ ಯಜುರ್ವೇದೋ ಸಾಮವೇದೋ ಹ್ಯಥರ್ವಣಃ ॥
ಅಂಗೈಶ್ಚ ಸಹಿತಾಃ ಸರ್ವೇ ಕಲಶಾಂಬು ಸಮಾಶ್ರಿತಾಃ ।
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ।
ನರ್ಮದೇ ಸಿಂಧು ಕಾವೇರೀ ಜಲೇಽಸ್ಮಿನ್ ಸನ್ನಿಧಿಂ ಕುರು ॥
ಕಾವೇರೀ ತುಂಗಭದ್ರಾ ಚ ಕೃಷ್ಣವೇಣೀ ಚ ಗೌತಮೀ ।
ಭಾಗೀರಥೀತಿ ವಿಖ್ಯಾತಾಃ ಪಂಚಗಂಗಾಃ ಪ್ರಕೀರ್ತಿತಾಃ ॥
ಆಯಾಂತು ಶ್ರೀ ____ ಪೂಜಾರ್ಥಂ ಮಮ ದುರಿತಕ್ಷಯಕಾರಕಾಃ ।
ಓಂ ಓಂ ಓಂ ಕಲಶೋದಕೇನ ಪೂಜಾ ದ್ರವ್ಯಾಣಿ ಸಂಪ್ರೋಕ್ಷ್ಯ, (ದೇವರ ಪಂಚಪಾತ್ರದ ನೀರನ್ನು ಪೂಜಾ ಸಾಮಗ್ರಿಗಳ ಮೇಲೆ ಸಿಂಪಡಿಸಿ)
ದೇವಂ ಸಂಪ್ರೋಕ್ಷ್ಯ, (ದೇವರ ಮೇಲೆ ಸಿಂಪಡಿಸಿ)
ಆತ್ಮಾನಂ ಚ ಸಂಪ್ರೋಕ್ಷ್ಯ (ನಿಮ್ಮ ಮೇಲೆ ಸಿಂಪಡಿಸಿಕೊಳ್ಳಿ) ॥
ಶಂಖಪೂಜಾ –
(ನಿಮ್ಮ ಪೂಜಾ ಸ್ಥಳದಲ್ಲಿ ಶಂಖ ಇದ್ದರೆ ಶಂಖ ಪೂಜೆ ಮಾಡಿ, ಇಲ್ಲದಿದ್ದರೆ ಘಂಟಾ ಪೂಜೆ ಮಾಡಿ)
ಕಲಶೋದಕೇನ ಶಂಖಂ ಪೂರಯಿತ್ವಾ ॥ (ದೇವರ ಪಂಚಪಾತ್ರದ ನೀರನ್ನು ಶಂಖದಲ್ಲಿ ತುಂಬಿಸಿ)
ಶಂಖೇ ಗಂಧಕುಂಕುಮಪುಷ್ಪತುಲಸೀಪತ್ರೈರಲಂಕೃತ್ಯ ॥ (ಶಂಖಕ್ಕೆ ಗಂಧ-ಕುಂಕುಮದ ಬೊಟ್ಟು ಹಾಕಿ ಹೂವು, ತುಳಸಿ ಎಲೆಯಿಂದ ಅಲಂಕರಿಸಿ)
ಶಂಖಂ ಚಂದ್ರಾರ್ಕ ದೈವತಂ ಮಧ್ಯೇ ವರುಣ ದೇವತಾಂ ।
ಪೃಷ್ಠೇ ಪ್ರಜಾಪತಿಂ ವಿಂದ್ಯಾದಗ್ರೇ ಗಂಗಾ ಸರಸ್ವತೀಂ ॥
ತ್ರೈಲೋಕ್ಯೇಯಾನಿ ತೀರ್ಥಾನಿ ವಾಸುದೇವಸ್ಯದದ್ರಯಾ ।
ಶಂಖೇ ತಿಷ್ಠಂತು ವಿಪ್ರೇಂದ್ರಾ ತಸ್ಮಾತ್ ಶಂಖಂ ಪ್ರಪೂಜಯೇತ್ ॥
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧೃತಃ ಕರೇ ।
ಪೂಜಿತಃ ಸರ್ವದೇವೈಶ್ಚ ಪಾಂಚಜನ್ಯ ನಮೋಽಸ್ತು ತೇ ॥
ಗರ್ಭಾದೇವಾರಿನಾರೀಣಾಂ ವಿಶೀರ್ಯಂತೇ ಸಹಸ್ರಧಾ ।
ನವನಾದೇನಪಾತಾಲೇ ಪಾಂಚಜನ್ಯ ನಮೋಽಸ್ತು ತೇ ॥
ಓಂ ಶಂಖಾಯ ನಮಃ ।
ಓಂ ಧವಲಾಯ ನಮಃ ।
ಓಂ ಪಾಂಚಜನ್ಯಾಯ ನಮಃ ।
ಓಂ ಶಂಖದೇವತಾಭ್ಯೋ ನಮಃ ।
ಸಕಲಪೂಜಾರ್ಥೇ ಅಕ್ಷತಾನ್ ಸಮರ್ಪಯಾಮಿ ॥
(ಸ್ವಲ್ಪ ಹೂವು-ಅಕ್ಷತೆಯನ್ನು ಶಂಖದ ಬಳಿ ಇಟ್ಟು ನಮಸ್ಕರಿಸಿ)
ಘಂಟಪೂಜಾ –
ಓಂ ಜಯಧ್ವನಿ ಮಂತ್ರಮಾತಃ ಸ್ವಾಹಾ ।
ಘಂಟದೇವತಾಭ್ಯೋ ನಮಃ ।
ಸಕಲೋಪಚಾರ ಪೂಜಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಸ್ವಲ್ಪ ಹೂವು-ಅಕ್ಷತೆಯನ್ನು ಘಂಟೆಯ ಬಳಿ ಇಟ್ಟು ನಮಸ್ಕರಿಸಿ)
ಘಂಟಾನಾದಂ –
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಾಕ್ಷಸಾಂ ।
ಘಂಟಾರವಂ ಕರೋಮ್ಯಾದೌ ದೇವತಾಹ್ವಾನ ಲಾಂಛನಂ ॥
ಇತಿ ಘಂಟಾನಾದಂ ಕೃತ್ವಾ ॥
(ಮೇಲಿನ ಶ್ಲೋಕವನ್ನು ಪಠಿಸಿ ಘಂಟೆಯನ್ನು ಬಾರಿಸಿ)