ಸೂಚನೆಗಳು:
3. ಆ ತರುವಾಯ, ಕೆಳಗೆ ನೀಡಿರುವ ವಿವರವಾದ ಪೂಜಾ ವಿಧಾನವನ್ನು ಅನುಸರಿಸಿ ।
ಪುನಃ ಸಂಕಲ್ಪಂ –
(ಹೂವುಗಳು ಮತ್ತು ಅಕ್ಷತೆಗಳನ್ನು ತೆಗೆದುಕೊಂಡು, ಬಲಗೈಯಲ್ಲಿ ಒಂದು ಹನಿ ನೀರನ್ನು ತೆಗೆದುಕೊಂಡು, ಕೆಳಗೆ ನೀಡಲಾದ ಸಂಕಲ್ಪವನ್ನು ಓದಿ)
ಪೂರ್ವೋಕ್ತ ಏವಂ ಗುಣವಿಶೇಷಣ ವಿಶಿಷ್ಟಾಯಾಂ ಶುಭತಿಥೌ ಶ್ರೀಮಹಗಣಪತಿಮುದ್ದಿಶ್ಯ ಶ್ರೀಮಹಾಗಣಪತಿಪ್ರೀತ್ಯರ್ಥಂ ಶ್ರೀಮನ್ಮುದ್ಗಲಪುರಾಣೇ ಶ್ರೀಗೃತ್ಸಮದ ಪ್ರೋಕ್ತ ಶ್ಲೋಕವಿಧಾನೇನ ಯಾವಚ್ಛಕ್ತಿ ಧ್ಯಾನಾವಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ॥
(ಇದನ್ನು ಓದಿ ಹೂವು ಮತ್ತು ಅಕ್ಷತೆಗಳನ್ನು ಪಾತ್ರೆಯಲ್ಲಿ ಇಟ್ಟು, ಕೈಗಳನ್ನು ಶುಚಿ ಮಾಡಿಕೊಳ್ಳಿ)
ಪ್ರಾಣಪ್ರತಿಷ್ಠ –
ಓಂ ಅಸು॑ನೀತೇ॒ ಪುನ॑ರ॒ಸ್ಮಾಸು॒ ಚಕ್ಷು॒:
ಪುನ॑: ಪ್ರಾ॒ಣಮಿ॒ಹ ನೋ᳚ ಧೇಹಿ॒ ಭೋಗಂ᳚ ।
ಜ್ಯೋಕ್ಪ॑ಶ್ಯೇಮ॒ ಸೂರ್ಯ॑ಮು॒ಚ್ಚರಂ᳚ತ॒
ಮನು॑ಮತೇ ಮೃ॒ಡಯಾ᳚ ನಃ ಸ್ವ॒ಸ್ತಿ ॥
ಅ॒ಮೃತಂ॒ ವೈ ಪ್ರಾ॒ಣಾ ಅ॒ಮೃತ॒ಮಾಪ॑:
ಪ್ರಾ॒ಣಾನೇ॒ವ ಯ॑ಥಾಸ್ಥಾ॒ನಮುಪ॑ಹ್ವಯತೇ ॥
ಆವಾಹಿತೋ ಭವ ಸ್ಥಾಪಿತೋ ಭವ ।
ಸುಪ್ರಸನ್ನೋ ಭವ ವರದೋ ಭವ ।
ಅಸ್ಮಿನ್ ಬಿಂಬೇ ಸಪರಿವಾರ ಸಮೇತ ಶ್ರೀಮಹಾಗಣಪತಿ ಸ್ವಾಮಿನಂ ಆವಾಹಯಾಮಿ ಸ್ಥಾಪಯಾಮಿ ಪೂಜಯಾಮಿ ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಧ್ಯಾನಂ –
ಓಂ ಗ॒ಣಾನಾಂ᳚ ತ್ವಾ ಗ॒ಣಪ॑ತಿಗ್ಂ ಹವಾಮಹೇ
ಕ॒ವಿಂ ಕ॑ವೀ॒ನಾಮು॑ಪ॒ಮಶ್ರ॑ವಸ್ತಮಂ ।
ಜ್ಯೇ॒ಷ್ಠ॒ರಾಜಂ॒ ಬ್ರಹ್ಮ॑ಣಾಂ ಬ್ರಹ್ಮಣಸ್ಪತ॒
ಆ ನ॑: ಶೃ॒ಣ್ವನ್ನೂ॒ತಿಭಿ॑: ಸೀದ॒ ಸಾದ॑ನಂ ॥
ಚತುರ್ಬಾಹುಂ ತ್ರಿನೇತ್ರಂ ಚ ಗಜಾಸ್ಯಂ ರಕ್ತವರ್ಣಕಂ ।
ಪಾಶಾಂಕುಶಾದಿಸಮ್ಯುಕ್ತಂ ಮಾಯಾಯುಕ್ತಂ ಪ್ರಚಿಂತಯೇತ್ ॥
ಓಂ ಶ್ರೀಮಹಾಗಣಪತಯೇ ನಮಃ ಧ್ಯಾಯಾಮಿ ।
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಆವಾಹನಂ –
ಆಗಚ್ಛ ಬ್ರಹ್ಮಣಾಂ ನಾಥ ಸುರಾಽಸುರವರಾರ್ಚಿತ ।
ಸಿದ್ಧಿಬುದ್ಧ್ಯಾದಿಸಮ್ಯುಕ್ತ ಭಕ್ತಿಗ್ರಹಣಲಾಲಸ ॥
ಓಂ ಶ್ರೀಮಹಾಗಣಪತಯೇ ನಮಃ ಆವಹಯಾಮಿ ।
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಸಿಂಹಾಸನಂ –
ರತ್ನಸಿಂಹಾಸನಂ ಸ್ವಾಮಿನ್ ಗೃಹಾಣ ಗಣನಾಯಕ ।
ತತ್ರೋಪವಿಶ್ಯ ವಿಘ್ನೇಶ ರಕ್ಷ ಭಕ್ತಾನ್ವಿಶೇಷತಃ ॥
ಓಂ ಶ್ರೀಮಹಾಗಣಪತಯೇ ನಮಃ ಆಸನಂ ಸಮರ್ಪಯಾಮಿ ।
(ಸ್ವಾಮಿಗೆ ಸಿಂಹಾಸನವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಪಾದ್ಯಂ –
ಸುವಾಸಿತಾಭಿರದ್ಭಿಶ್ಚ ಪಾದಪ್ರಕ್ಷಾಲನಂ ಪ್ರಭೋ ।
ಶೀತೋಷ್ಣಾಂಭಃ ಕರೋಮಿ ತೇ ಗೃಹಾಣ ಪಾದ್ಯಮುತ್ತಮಂ ॥
ಓಂ ಶ್ರೀಮಹಾಗಣಪತಯೇ ನಮಃ ಪಾದ್ಯಂ ಸಮರ್ಪಯಾಮಿ ।
(ಸ್ವಾಮಿಯ ಪಾದಗಳನ್ನು ತೊಳೆಯುತ್ತಿರುವ ಭಾವನೆಯೊಂದಿಗೆ, ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ)
ಅರ್ಘ್ಯಂ –
ರತ್ನಪ್ರವಾಲಮುಕ್ತಾದ್ಯೈರನರ್ಘ್ಯೈಃ ಸಂಸ್ಕೃತಂ ಪ್ರಭೋ ।
ಅರ್ಘ್ಯಂ ಗೃಹಾಣ ಹೇರಂಬ ದ್ವಿರದಾನನ ತೋಷಕಂ ॥
ಓಂ ಶ್ರೀಮಹಾಗಣಪತಯೇ ನಮಃ ಅರ್ಘ್ಯಂ ಸಮರ್ಪಯಾಮಿ ।
(ಸ್ವಾಮಿಯ ಕೈಗಳನ್ನು ತೊಳೆಯುತ್ತಿರುವ ಭಾವನೆಯೊಂದಿಗೆ, ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ)
ಆಚಮನೀಯಂ –
ಸರ್ವತೀರ್ಥಾಹೃತಂ ತೋಯಂ ಸುವಾಸಿತಂ ಸುವಸ್ತುಭಿಃ ।
ಆಚಮನಂ ಚ ತೇನೈವ ಕುರುಷ್ವ ಗಣನಾಯಕ ॥
ಓಂ ಶ್ರೀಮಹಾಗಣಪತಯೇ ನಮಃ ಆಚಮನೀಯಂ ಸಮರ್ಪಯಾಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ಮಧುಪರ್ಕಂ –
ದಧಿಮಧುಘೃತೈರ್ಯುಕ್ತಂ ಮಧುಪರ್ಕಂ ಗಜಾನನ ।
ಗೃಹಾಣ ಭಾವಸಮ್ಯುಕ್ತಂ ಮಯಾ ದತ್ತಂ ನಮೋಽಸ್ತು ತೇ ॥
ಓಂ ಶ್ರೀಮಹಾಗಣಪತಯೇ ನಮಃ ಮಧುಪರ್ಕಂ ಸಮರ್ಪಯಾಮಿ ।
(ಸ್ವಾಮಿಗೆ ಮಧುಪರ್ಕ ಅರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಪಂಚಾಮೃತ ಸ್ನಾನಂ-
ಆಪ್ಯಾ॑ಯಸ್ವ॒ ಸಮೇ॑ತು ತೇ ವಿ॒ಶ್ವತ॑ಸ್ಸೋಮ॒ ವೃಷ್ಣಿ॑ಯಂ ।
ಭವಾ॒ ವಾಜ॑ಸ್ಯ ಸಂಗ॒ಥೇ ॥
ಓಂ ಶ್ರೀ ______ ನಮಃ ಕ್ಷೀರೇಣ ಸ್ನಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಪಂಚಾಮೃತ ಸ್ನಾನ ಮಾಡಿಸಿ)
ಸ್ನಾನಂ –
ಗಂಗಾದಿ ಸರ್ವತೀರ್ಥೇಭ್ಯಃ ಆಹೃತೈರಮಲೈರ್ಜಲೈಃ ।
ಸ್ನಾನಂ ಕುರುಷ್ವ ಭಗವಾನುಮಾಪುತ್ರ ನಮೋಽಸ್ತುತೇ ॥
ಓಂ ಶ್ರೀಮಹಾಗಣಪತಯೇ ನಮಃ ಶುದ್ಧೋದಕ ಸ್ನಾನಂ ಸಮರ್ಪಯಾಮಿ ।
(ಹೂವಿನಿಂದ ಸ್ವಾಮಿಯ ಮೇಲೆ ದೇವರ ಪಂಚಪಾತ್ರೆಯ ಸ್ವಲ್ಪ ನೀರು ಚಿಮುಕಿಸಿ, ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು, ಸ್ವಾಮಿಗೆ ಸ್ನಾನ ಮಾಡಿಸಿದ ಭಾವನೆ ಮಾಡಿ)
ಸ್ನಾನಾನಂತರಂ ಶುದ್ಧ ಆಚಮನೀಯಂ ಸಮರ್ಪಯಾಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ವಸ್ತ್ರಂ –
ವಸ್ತ್ರಯುಗ್ಮಂ ಗೃಹಾಣ ತ್ವಮನರ್ಘಂ ರಕ್ತವರ್ಣಕಂ ।
ಲೋಕಲಜ್ಜಾಹರಂ ಚೈವ ವಿಘ್ನನಾಥ ನಮೋಽಸ್ತು ತೇ ॥
ಓಂ ಶ್ರೀಮಹಾಗಣಪತಯೇ ನಮಃ ವಸ್ತ್ರಯುಗ್ಮಂ ಸಮರ್ಪಯಾಮಿ ।
(ಸ್ವಾಮಿಗೆ ವಸ್ತ್ರವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಯಜ್ಞೋಪವೀತಂ –
ಉಪವೀತಂ ಗಣಾಧ್ಯಕ್ಷ ಗೃಹಾಣ ಚ ತತಃ ಪರಂ ।
ತ್ರೈಗುಣ್ಯಮಯರೂಪಂ ತು ಪ್ರಣವಗ್ರಂಥಿಬಂಧನಂ ॥
ಓಂ ಶ್ರೀಮಹಾಗಣಪತಯೇ ನಮಃ ಉಪವೀತಂ ಸಮರ್ಪಯಾಮಿ ।
(ಸ್ವಾಮಿಗೆ ಯಜ್ಞೋಪವೀತವನ್ನು ಅರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಆಭರಣಂ –
ನಾನಾಭೂಷಣಕಾನಿ ತ್ವಮಂಗೇಷು ವಿವಿಧೇಷು ಚ ।
ಭಾಸುರಸ್ವರ್ಣರತ್ನೈಶ್ಚ ನಿರ್ಮಿತಾನಿ ಗೃಹಾಣ ಭೋ ॥
ಓಂ ಶ್ರೀಮಹಾಗಣಪತಯೇ ನಮಃ ಆಭರಣಾನಿ ಸಮರ್ಪಯಾಮಿ ।
(ಸ್ವಾಮಿಗೆ ಆಭರಣಗಳನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಗೆ ಸಮರ್ಪಿಸಿ)
ಗಂಧಂ –
ಅಷ್ಟಗಂಧಸಮಾಯುಕ್ತಂ ಗಂಧಂ ರಕ್ತಂ ಗಜಾನನ ।
ದ್ವಾದಶಾಂಗೇಷು ತೇ ಢುಂಢೇ ಲೇಪಯಾಮಿ ಸುಚಿತ್ರವತ್ ॥
ಓಂ ಶ್ರೀಮಹಾಗಣಪತಯೇ ನಮಃ ಗಂಧಾನ್ ಸಮರ್ಪಯಾಮಿ ।
(ಗಂಧವನ್ನು ನೀರಿನಲ್ಲಿ ನೆನೆಸಿ, ಒಂದು ಹೂವಿನಿಂದ ಸ್ವಾಮಿಯ ಮೇಲೆ ಚಿಮುಕಿಸಿ, ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟುಬಿಡಿ)
ಅಕ್ಷತಾನ್ –
ರಕ್ತಚಂದನಸಮ್ಯುಕ್ತಾನಥವಾ ಕುಂಕುಮೈರ್ಯುತಾನ್ ।
ಅಕ್ಷತಾನ್ವಿಘ್ನರಾಜ ತ್ವಂ ಗೃಹಾಣ ಫಾಲಮಂಡಲೇ ॥
ಓಂ ಶ್ರೀಮಹಾಗಣಪತಯೇ ನಮಃ ಅಕ್ಷತಾನ್ ಸಮರ್ಪಯಾಮಿ ।
(ಸ್ವಲ್ಪ ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಪುಷ್ಪಂ –
ಚಂಪಕಾದಿಸುವೃಕ್ಷೇಭ್ಯಃ ಸಂಭೂತಾನಿ ಗಜಾನನ ।
ಪುಷ್ಪಾಣಿ ಶಮೀಮಂದಾರದೂರ್ವಾದೀನಿ ಗೃಹಾಣ ಚ ॥
ಓಂ ಶ್ರೀಮಹಾಗಣಪತಯೇ ನಮಃ ನಾನಾವಿಧ ಪರಿಮಲ ಪುಷ್ಪಾಣಿ ಸಮರ್ಪಯಾಮಿ ।
(ಸ್ವಲ್ಪ ಹೂವುಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಅಷ್ಟೋತ್ತರ ಶತ ನಾಮಾವಲೀ –
(ಪ್ರತಿ ನಾಮಕ್ಕೂ ಒಂದೊಂದು ಹೂವನ್ನು ಸ್ವಾಮಿಗೆ ಅರ್ಪಿಸಿ, ಹೂವು ಲಭ್ಯವಿಲ್ಲದಿದ್ದರೆ, ಅಕ್ಷತೆಯನ್ನು ಬಳಸಿ)
ಓಂ ಗಜಾನನಾಯ ನಮಃ ।
ಓಂ ಗಣಾಧ್ಯಕ್ಷಾಯ ನಮಃ ।
ಓಂ ವಿಘ್ನಾರಾಜಾಯ ನಮಃ ।
ಓಂ ವಿನಾಯಕಾಯ ನಮಃ ।
ಓಂ ದ್ವೈಮಾತುರಾಯ ನಮಃ ।
ಓಂ ದ್ವಿಮುಖಾಯ ನಮಃ ।
ಓಂ ಪ್ರಮುಖಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ಕೃತಿನೇ ನಮಃ ।
ಓಂ ಸುಪ್ರದೀಪಾಯ ನಮಃ । 10
ಓಂ ಸುಖನಿಧಯೇ ನಮಃ ।
ಓಂ ಸುರಾಧ್ಯಕ್ಷಾಯ ನಮಃ ।
ಓಂ ಸುರಾರಿಘ್ನಾಯ ನಮಃ ।
ಓಂ ಮಹಾಗಣಪತಯೇ ನಮಃ ।
ಓಂ ಮಾನ್ಯಾಯ ನಮಃ ।
ಓಂ ಮಹಾಕಾಲಾಯ ನಮಃ ।
ಓಂ ಮಹಾಬಲಾಯ ನಮಃ ।
ಓಂ ಹೇರಂಬಾಯ ನಮಃ ।
ಓಂ ಲಂಬಜಠರಾಯ ನಮಃ ।
ಓಂ ಹ್ರಸ್ವಗ್ರೀವಾಯ ನಮಃ । 20
ಓಂ ಮಹೋದರಾಯ ನಮಃ ।
ಓಂ ಮದೋತ್ಕಟಾಯ ನಮಃ ।
ಓಂ ಮಹಾವೀರಾಯ ನಮಃ ।
ಓಂ ಮಂತ್ರಿಣೇ ನಮಃ ।
ಓಂ ಮಂಗಲಸ್ವರಾಯ ನಮಃ ।
ಓಂ ಪ್ರಮಥಾಯ ನಮಃ ।
ಓಂ ಪ್ರಥಮಾಯ ನಮಃ ।
ಓಂ ಪ್ರಾಜ್ಞಾಯ ನಮಃ ।
ಓಂ ವಿಘ್ನಕರ್ತ್ರೇ ನಮಃ ।
ಓಂ ವಿಘ್ನಹಂತ್ರೇ ನಮಃ । 30
ಓಂ ವಿಶ್ವನೇತ್ರೇ ನಮಃ ।
ಓಂ ವಿರಾಟ್ಪತಯೇ ನಮಃ ।
ಓಂ ಶ್ರೀಪತಯೇ ನಮಃ ।
ಓಂ ವಾಕ್ಪತಯೇ ನಮಃ ।
ಓಂ ಶೃಂಗಾರಿಣೇ ನಮಃ ।
ಓಂ ಆಶ್ರಿತವತ್ಸಲಾಯ ನಮಃ ।
ಓಂ ಶಿವಪ್ರಿಯಾಯ ನಮಃ ।
ಓಂ ಶೀಘ್ರಕಾರಿಣೇ ನಮಃ ।
ಓಂ ಶಾಶ್ವತಾಯ ನಮಃ ।
ಓಂ ಬಲಾಯ ನಮಃ । 40
ಓಂ ಬಲೋದ್ಧಿತಾಯ ನಮಃ ।
ಓಂ ಭವಾತ್ಮಜಾಯ ನಮಃ ।
ಓಂ ಪುರಾಣಪುರುಷಾಯ ನಮಃ ।
ಓಂ ಪೂಷ್ಣೇ ನಮಃ ।
ಓಂ ಪುಷ್ಕರೋತ್ಷಿಪ್ತವಾರಿಣೇ ನಮಃ ।
ಓಂ ಅಗ್ರಗಣ್ಯಾಯ ನಮಃ ।
ಓಂ ಅಗ್ರಪೂಜ್ಯಾಯ ನಮಃ ।
ಓಂ ಅಗ್ರಗಾಮಿನೇ ನಮಃ ।
ಓಂ ಮಂತ್ರಕೃತೇ ನಮಃ ।
ಓಂ ಚಾಮೀಕರಪ್ರಭಾಯ ನಮಃ । 50
ಓಂ ಸರ್ವಾಯ ನಮಃ ।
ಓಂ ಸರ್ವೋಪಾಸ್ಯಾಯ ನಮಃ ।
ಓಂ ಸರ್ವಕರ್ತ್ರೇ ನಮಃ ।
ಓಂ ಸರ್ವನೇತ್ರೇ ನಮಃ ।
ಓಂ ಸರ್ವಸಿದ್ಧಿಪ್ರದಾಯ ನಮಃ ।
ಓಂ ಸರ್ವಸಿದ್ಧಯೇ ನಮಃ ।
ಓಂ ಪಂಚಹಸ್ತಾಯ ನಮಃ ।
ಓಂ ಪಾರ್ವತೀನಂದನಾಯ ನಮಃ ।
ಓಂ ಪ್ರಭವೇ ನಮಃ ।
ಓಂ ಕುಮಾರಗುರವೇ ನಮಃ । 60
ಓಂ ಅಕ್ಷೋಭ್ಯಾಯ ನಮಃ ।
ಓಂ ಕುಂಜರಾಸುರಭಂಜನಾಯ ನಮಃ ।
ಓಂ ಪ್ರಮೋದಾಯ ನಮಃ ।
ಓಂ ಮೋದಕಪ್ರಿಯಾಯ ನಮಃ ।
ಓಂ ಕಾಂತಿಮತೇ ನಮಃ ।
ಓಂ ಧೃತಿಮತೇ ನಮಃ ।
ಓಂ ಕಾಮಿನೇ ನಮಃ ।
ಓಂ ಕಪಿತ್ಥವನಪ್ರಿಯಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಬ್ರಹ್ಮರೂಪಿಣೇ ನಮಃ । 70
ಓಂ ಬ್ರಹ್ಮವಿದ್ಯಾದಿದಾನಭುವೇ ನಮಃ ।
ಓಂ ಜಿಷ್ಣವೇ ನಮಃ ।
ಓಂ ವಿಷ್ಣುಪ್ರಿಯಾಯ ನಮಃ ।
ಓಂ ಭಕ್ತಜೀವಿತಾಯ ನಮಃ ।
ಓಂ ಜಿತಮನ್ಮಥಾಯ ನಮಃ ।
ಓಂ ಐಶ್ವರ್ಯಕಾರಣಾಯ ನಮಃ ।
ಓಂ ಜ್ಯಾಯಸೇ ನಮಃ ।
ಓಂ ಯಕ್ಷಕಿನ್ನರಸೇವಿತಾಯ ನಮಃ ।
ಓಂ ಗಂಗಾಸುತಾಯ ನಮಃ ।
ಓಂ ಗಣಾಧೀಶಾಯ ನಮಃ । 80
ಓಂ ಗಂಭೀರನಿನದಾಯ ನಮಃ ।
ಓಂ ವಟವೇ ನಮಃ ।
ಓಂ ಅಭೀಷ್ಟವರದಾಯಿನೇ ನಮಃ ।
ಓಂ ಜ್ಯೋತಿಷೇ ನಮಃ ।
ಓಂ ಭಕ್ತನಿಧಯೇ ನಮಃ ।
ಓಂ ಭಾವಗಮ್ಯಾಯ ನಮಃ ।
ಓಂ ಮಂಗಲಪ್ರದಾಯ ನಮಃ ।
ಓಂ ಅವ್ಯಕ್ತಾಯ ನಮಃ ।
ಓಂ ಅಪ್ರಾಕೃತಪರಾಕ್ರಮಾಯ ನಮಃ ।
ಓಂ ಸತ್ಯಧರ್ಮಿಣೇ ನಮಃ । 90
ಓಂ ಸಖಯೇ ನಮಃ ।
ಓಂ ಸರಸಾಂಬುನಿಧಯೇ ನಮಃ ।
ಓಂ ಮಹೇಶಾಯ ನಮಃ ।
ಓಂ ದಿವ್ಯಾಂಗಾಯ ನಮಃ ।
ಓಂ ಮಣಿಕಿಂಕಿಣೀಮೇಖಾಲಾಯ ನಮಃ ।
ಓಂ ಸಮಸ್ತದೇವತಾಮೂರ್ತಯೇ ನಮಃ ।
ಓಂ ಸಹಿಷ್ಣವೇ ನಮಃ ।
ಓಂ ಸತತೋತ್ಥಿತಾಯ ನಮಃ ।
ಓಂ ವಿಘಾತಕಾರಿಣೇ ನಮಃ ।
ಓಂ ವಿಶ್ವದೃಶೇ ನಮಃ । 100
ಓಂ ವಿಶ್ವರಕ್ಷಾಕೃತೇ ನಮಃ ।
ಓಂ ಕಲ್ಯಾಣಗುರವೇ ನಮಃ ।
ಓಂ ಉನ್ಮತ್ತವೇಷಾಯ ನಮಃ ।
ಓಂ ಅಪರಾಜಿತೇ ನಮಃ ।
ಓಂ ಸಮಸ್ತಜಗದಾಧಾರಾಯ ನಮಃ ।
ಓಂ ಸರ್ವೈಶ್ವರ್ಯಪ್ರದಾಯ ನಮಃ ।
ಓಂ ಆಕ್ರಾಂತಚಿದಚಿತ್ಪ್ರಭವೇ ನಮಃ ।
ಓಂ ಶ್ರೀವಿಘ್ನೇಶ್ವರಾಯ ನಮಃ । 108
ಧೂಪಂ –
ದಶಾಂಗಂ ಗುಗ್ಗುಲುಂ ಧೂಪಂ ಸರ್ವಸೌರಭಕಾರಕಂ ।
ಗೃಹಾಣ ತ್ವಂ ಮಯಾ ದತ್ತಂ ವಿನಾಯಕ ಮಹೋದರ ॥
ಓಂ ಶ್ರೀಮಹಾಗಣಪತಯೇ ನಮಃ ಧೂಪಮಾಘ್ರಾಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಉರಿಯುತ್ತಿರುವ ಅಗರ್ಬತ್ತಿಯನ್ನು ತೋರಿಸಿ)
ದೀಪಂ –
ನಾನಾಜಾತಿಭವಂ ದೀಪಂ ಗೃಹಾಣ ಗಣನಾಯಕ ।
ಅಜ್ಞಾನಮಲಜಂ ದೀಪಂ ಹರಂತಂ ಜ್ಯೋತಿರೂಪಕಂ ॥
ಓಂ ಶ್ರೀಮಹಾಗಣಪತಯೇ ನಮಃ ದೀಪಂ ದರ್ಶಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಉರಿಯುತ್ತಿರುವ ದೀಪವನ್ನು ತೋರಿಸಿ)
ಧೂಪ ದೀಪಾನಂತರಂ ಆಚಮನೀಯಂ ಸಮರ್ಪಯಾಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ನೈವೇದ್ಯಂ –
ಚತುರ್ವಿಧಾನ್ನಸಂಪನ್ನಂ ಮಧುರಂ ಲಡ್ಡುಕಾದಿಕಂ ।
ನೈವೇದ್ಯಂ ತೇ ಮಯಾ ದತ್ತಂ ಭೋಜನಂ ಕುರು ವಿಘ್ನಪ ॥
ಓಂ ಶ್ರೀಮಹಾಗಣಪತಯೇ ನಮಃ ನೈವೇದ್ಯಂ ಸಮರ್ಪಯಾಮಿ ।
(ಘಂಟಾನಾದ ಮಾಡುತ್ತಾ, ಕೆಳಗಿನ ಮಂತ್ರವನ್ನು ಉಚ್ಚರಿಸುತ್ತಾ ಹೂವಿನಿಂದ ನೀರನ್ನು ನೈವೇದ್ಯದ ಸುತ್ತಲೂ 3 ಸಲ ಸವ್ಯ ದಿಕ್ಕಿನಲ್ಲಿ ಚಿಮುಕಿಸಿ)
ಓಂ ಭೂರ್ಭುವ॒ಸ್ಸುವ॑: । ತತ್ಸ॑ವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ ।
ಧಿಯೋ॒ ಯೋ ನ॑: ಪ್ರಚೋ॒ದಯಾ᳚ತ್ ॥
ಸತ್ಯಂ ತ್ವಾ ಋತೇನ ಪರಿಷಿಂಚಾಮಿ (ಹೂವಿನಿಂದ ನೈವೇದ್ಯದ ಮೇಲೆ ನೀರನ್ನು ಚಿಮುಕಿಸಿ)
(ಸಾಯಂಕಾಲೇ) – ಋತಂ ತ್ವಾ ಸತ್ಯೇನ ಪರಿಷಿಂಚಾಮಿ (ಹೂವಿನಿಂದ ನೈವೇದ್ಯದ ಮೇಲೆ ನೀರನ್ನು ಚಿಮುಕಿಸಿ)
ಅಮೃತಮಸ್ತು । ಅ॒ಮೃ॒ತೋ॒ಪ॒ಸ್ತರ॑ಣಮಸಿ । (ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟುಬಿಡಿ)
ಓಂ ಪ್ರಾ॒ಣಾಯ॒ ಸ್ವಾಹಾ᳚ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಅ॒ಪಾ॒ನಾಯ॒ ಸ್ವಾಹಾ᳚ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ವ್ಯಾ॒ನಾಯ॒ ಸ್ವಾಹಾ᳚ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಉ॒ದಾ॒ನಾಯ॒ ಸ್ವಾಹಾ᳚ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಸ॒ಮಾ॒ನಾಯ॒ ಸ್ವಾಹಾ᳚ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
(ಕೆಳಗಿನ ಮಂತ್ರಗಳನ್ನು ಉಚ್ಚರಿಸುತ್ತಾ ಹೂವಿನಿಂದ ನೀರನ್ನು ದೇವರ ಮೇಲೆ 5 ಸಲ ಚಿಮುಕಿಸಿ)
ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ।
ಅ॒ಮೃ॒ತಾ॒ಪಿ॒ಧಾ॒ನಮ॑ಸಿ ।
ಉತ್ತರಾಪೋಶನಂ ಸಮರ್ಪಯಾಮಿ ।
ಹಸ್ತೌ ಪ್ರಕ್ಷಾಲಯಾಮಿ ।
ಪಾದೌ ಪ್ರಕ್ಷಾಲಯಾಮಿ ।
ಶುದ್ಧಾಚಮನೀಯಂ ಸಮರ್ಪಯಾಮಿ ।
ತಾಂಬೂಲಂ –
ಅಷ್ಟಾಂಗಂ ದೇವ ತಾಂಬೂಲಂ ಗೃಹಾಣ ಮುಖವಾಸನಂ ।
ಅಸಕೃದ್ವಿಘ್ನರಾಜ ತ್ವಂ ಮಯಾ ದತ್ತಂ ವಿಶೇಷತಃ ॥
ಓಂ ಶ್ರೀಮಹಾಗಣಪತಯೇ ನಮಃ ತಾಂಬೂಲಂ ಸಮರ್ಪಯಾಮಿ ।
(ಸ್ವಾಮಿಗೆ ತಾಂಬೂಲವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ನೀರಾಜನಂ –
ನಾನಾದೀಪಸಮಾಯುಕ್ತಂ ನೀರಾಜನಂ ಗಜಾನನ ।
ಗೃಹಾಣ ಭಾವಸಮ್ಯುಕ್ತಂ ಸರ್ವಾಜ್ಞಾನವಿನಾಶನ ॥
ಓಂ ಶ್ರೀಮಹಾಗಣಪತಯೇ ನಮಃ ನೀರಾಜನಂ ಸಮರ್ಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಕರ್ಪೂರದ ಹಾರತಿ ಕೊಡಿ)
ಮಂತ್ರಪುಷ್ಪಂ –
ಓಂ ಗ॒ಣಾನಾಂ᳚ ತ್ವಾ ಗ॒ಣಪ॑ತಿಂ ಹವಾಮಹೇ
ಕ॒ವಿಂ ಕ॑ವೀ॒ನಾಮು॑ಪ॒ಮಶ್ರ॑ವಸ್ತಮಂ ।
ಜ್ಯೇ॒ಷ್ಠ॒ರಾಜಂ॒ ಬ್ರಹ್ಮ॑ಣಾಂ ಬ್ರಹ್ಮಣಸ್ಪತ॒
ಆ ನ॑: ಶೃ॒ಣ್ವನ್ನೂ॒ತಿಭಿ॑ಸ್ಸೀದ॒ ಸಾದ॑ನಂ ॥
ಚತುರ್ವೇದಭವೈರ್ಮಂತ್ರೈರ್ಗಾಣಪತ್ಯೈರ್ಗಜಾನನ ।
ಮಂತ್ರಿತಾನಿ ಗೃಹಾಣ ತ್ವಂ ಪುಷ್ಪಪತ್ರಾಣಿ ವಿಘ್ನಪ ॥
ಓಂ ಶ್ರೀಮಹಾಗಣಪತಯೇ ನಮಃ ಮಂತ್ರಪುಷ್ಪಂ ಸಮರ್ಪಯಾಮಿ ।
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಪ್ರದಕ್ಷಿಣಂ –
ಏಕವಿಂಶತಿಸಂಖ್ಯಂ ವಾ ತ್ರಿಸಂಖ್ಯಂ ವಾ ಗಜಾನನ ।
ಪ್ರಾದಕ್ಷಿಣ್ಯಂ ಗೃಹಾಣ ತ್ವಂ ಬ್ರಹ್ಮನ್ ಬ್ರಹ್ಮೇಶಭಾವನ ॥
ಓಂ ಶ್ರೀಮಹಾಗಣಪತಯೇ ನಮಃ ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ ।
(ಅಕ್ಷತೆ ಮತ್ತು ಹೂವನ್ನು ತೆಗೆದುಕೊಂಡು, ಆತ್ಮ ಪ್ರದಕ್ಷಿಣೆ ಮೂರು ಸಲ ಮಾಡಿ, ನಂತರ ಅವುಗಳನ್ನು ಸ್ವಾಮಿಯ ಪಾದಗಳಲ್ಲಿ ಇಡಿ)
ಸಾಷ್ಟಾಂಗನಮಸ್ಕಾರಃ –
ಸಾಷ್ಟಾಂಗಾಂ ಪ್ರಣತಿಂ ನಾಥ ಏಕವಿಂಶತಿಸಮ್ಮಿತಾಂ ।
ಹೇರಂಬ ಸರ್ವಪೂಜ್ಯ ತ್ವಂ ಗೃಹಾಣ ತು ಮಯಾ ಕೃತಂ ॥
ಓಂ ಶ್ರೀಮಹಾಗಣಪತಯೇ ನಮಃ ಸಾಷ್ಟಾಂಗ ನಮಸ್ಕಾರಾನ್ ಸಮರ್ಪಯಾಮಿ ।
(ಪುರುಷರು ಸಾಷ್ಟಾಂಗ, ಮಹಿಳೆಯರು ಪಂಚಾಂಗ ನಮಸ್ಕಾರ ಮಾಡಲಿ)
ನಮಸ್ಕಾರಂ –
ವಿಘ್ನೇಶ್ವರಾಯ ವರದಾಯ ಗಣೇಶ್ವರಾಯ ।
ಸರ್ವೇಶ್ವರಾಯ ಶುಭದಾಯ ಸುರೇಶ್ವರಾಯ ॥
ವಿದ್ಯಾಧರಾಯ ವಿಕಟಾಯ ಚ ವಾಮನಾಯ ।
ಭಕ್ತಿಪ್ರಸನ್ನ ವರದಾಯ ನಮೋ ನಮೋಽಸ್ತು ॥
(ನಮಸ್ಕಾರ ಮಾಡಿ)
ಕ್ಷಮಾಪ್ರಾರ್ಥನ –
ಅಪರಾಧಾನಸಂಖ್ಯಾತಾನ್ ಕ್ಷಮಸ್ವ ಗಣನಾಯಕ ।
ಭಕ್ತಂ ಕುರು ಚ ಮಾಂ ಢುಂಢೇ ತವ ಪಾದಪ್ರಿಯಂ ಸದಾ ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಸಮರ್ಪಣಂ –
ಜಾಗ್ರತ್ಸ್ವಪ್ನಸುಷುಪ್ತಿಭಿರ್ದೇಹವಾಙ್ಮನಸೈಃ ಕೃತಂ ।
ಸಾಂಸರ್ಗಿಕೇಣ ಯತ್ಕರ್ಮ ಗಣೇಶಾಯ ಸಮರ್ಪಯೇ ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಅನಯಾ ಧ್ಯಾನ ಆವಾಹನಾದಿ ಷೋಡಶೋಪಚಾರ ಪೂಜಯಾ ಭಗವಾನ್ ಸರ್ವಾತ್ಮಿಕಃ ಶ್ರೀ ಮಹಾಗಣಾಧಿಪತಿ
ಸುಪ್ರೀತೋ ಸುಪ್ರಸನ್ನೋ ವರದೋ ಭವಂತು ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ತೀರ್ಥಸ್ವೀಕರಣ –
ಬಾಹ್ಯಂ ನಾನಾವಿಧಂ ಪಾಪಂ ಮಹೋಗ್ರಂ ತಲ್ಲಯಂ ವ್ರಜೇತ್ ।
ಗಣೇಶಪಾದತೀರ್ಥಸ್ಯ ಮಸ್ತಕೇ ಧಾರಣಾತ್ಕಿಲ ॥
ಶ್ರೀ ಮಹಾಗಣಾಧಿಪತಿ ಪಾದೋದಕ ತೀರ್ಥಂ ಗೃಹ್ಣಾಮಿ ।
(ಬಲಗೈಯಲ್ಲಿ ನೀರನ್ನು ತೆಗೆದುಕೊಂಡು, ಮೇಲಿನ ಶ್ಲೋಕವನ್ನು ಓದಿ ಮೂರು ಸಲ ತೀರ್ಥವನ್ನು ಕುಡಿಯಿರಿ)
ಪ್ರಸಾದಸ್ವೀಕರಣ –
ತತೋಚ್ಛಿಷ್ಟಂ ತು ನೈವೇದ್ಯಂ ಗಣೇಶಸ್ಯ ಭುನಜ್ಮ್ಯಹಂ ।
ಭುಕ್ತಿಮುಕ್ತಿಪ್ರದಂ ಪೂರ್ಣಂ ನಾನಾಪಾಪನಿಕೃಂತನಂ ॥
ಶ್ರೀ ಮಹಾಗಣಾಧಿಪತಿ ಪ್ರಸಾದಂ ಶಿರಸಾ ಗೃಹ್ಣಾಮಿ ।
(ಸ್ವಾಮಿಯ ಪಾದಗಳಿಂದ ಒಂದು ಹೂವನ್ನು ತೆಗೆದುಕೊಂಡು ನಿಮ್ಮ ಎರಡೂ ಕಣ್ಣುಗಳಿಗೆ ಸ್ಪರ್ಶಿಸಿ)
ಓಂ ಶಾಂತಿಃ ಶಾಂತಿಃ ಶಾಂತಿಃ ॥